15 ಸೆಪ್ಟೆಂಬರ್ 2024

ಬೀದರ್ ನಿಂದ ಚಾಮರಾಜನಗರದ ವರೆಗೆ ಬೃಹತ್ ಮಾನವ ಸರಪಳಿ

2024 ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ಕೈ ಕೈ ಹಿಡಿದು ನಮ್ಮೊಂದಿಗೆ ಕೈ ಜೋಡಿಸಿ

2007 ರ ಸೆಪ್ಟೆಂಬರ್ 15 ರಂದು ವಿಶ್ವ ಪ್ರಜಾಪ್ರಭುತ್ವ ದಿನವು ಘೋಷಣೆಯಾಗಿದ್ದು ಜಗತ್ತಿನಾದ್ಯಂತ ಇದನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯು ಪ್ರಜಾಪ್ರಭುತ್ವ ದಿನವನ್ನು ಆಚರಿಸುವ ಕುರಿತು ಘೋಷಣೆ ಹೊರಡಿಸಿದ್ದು ಈ ದಿನವು ವಿಶ್ವ ಮಟ್ಟದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಸರಿಸುವ ವೇದಿಕೆಯಾಗಿದೆ.

ಕಾರ್ಯಕ್ರಮದ ಬಗ್ಗೆ

ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸಾರುವ ಮಾನವ ಸರಪಳಿಯು ಜಗತ್ತಿನ ಅತಿ ಉದ್ದದ ಮಾನವ ಸರಪಳಿಯಲ್ಲಿ ಒಂದಾಗಿರಲಿದೆ.

ಜನ ಸಾಮಾನ್ಯರೊಂದಿಗೆ ಸೇರಿ ಇಂತಹದ್ದೊಂದು ಮಹತ್ತರ ಕೆಲಸವನ್ನು ಮಾಡುವ ನೇತೃತ್ವವನ್ನು ರಾಜ್ಯ ಸರ್ಕಾರ ವಹಿಸಿಕೊಂಡಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಮತ್ತು ಅದನ್ನು ಹೆಚ್ಚು ಹೆಚ್ಚು ಉತ್ತೇಜಿಸುವ ನಮ್ಮ ಸರ್ಕಾರದ ಬದ್ಧತೆಗೆ ಅನುಸಾರವಾಗಿ ಈ ಮಾನವ ಸರಪಳಿಯನ್ನು ಆಯೋಜಿಸಲಾಗುತ್ತಿದ್ದು ಇದು ಬೀದರ್ ನಿಂದ ಚಾಮರಾಜನಗರದವರೆಗೆ ಒಟ್ಟು 31 ಜಿಲ್ಲೆಗಳನ್ನು ಒಳಗೊಳ್ಳಲಿದೆ.

ಸುಮಾರು 2500 ಕಿಲೋಮೀಟರ್ ಉದ್ದದ ಮಾನವ ಸರಪಳಿ ಇದಾಗಿರಲಿದ್ದು ಜಗತ್ತಿನ ಅತಿ ಉದ್ದದ ಮಾನವ ಸರಪಳಿ ಆಗಿರಲಿದೆ. ಇದರಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರತಿ ಕಿಲೋಮೀಟರ್ ಗೆ 1000 ಜನರು ಇರಲಿದ್ದಾರೆ.

ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜನರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಂದೇಶವನ್ನು ಬಿತ್ತರಿಸುವುದು ಮಾತ್ರವಲ್ಲದೇ, ಸರ್ಕಾರದ ಬಗೆಗಿನ ಜನರ ಭಾವನೆಯನ್ನು ಸಂಗ್ರಹಿಸಿ ಬಿತ್ತರಿಸಲಾಗುತ್ತದೆ.

ಈ ದಿನದಂದು ಮಾನವ ಸರಪಳಿಯ ಜೊತೆಗೆ ರಾಜ್ಯಾದ್ಯಂತ ಹತ್ತು ಲಕ್ಷ ಸಸಿಗಳನ್ನೂ ನೆಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ.

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹಾಗೂ ಸಮಾಜ ಕಲ್ಯಾಣ ಇಲಾಖಾ ಸಚಿವರಾದ ಮಾನ್ಯ ಡಾ ಹೆಚ್ ಸಿ ಮಹದೇವಪ್ಪನವರು ಈ ಬೃಹತ್ ಆಶಯದ ರುವಾರಿಗಳಾಗಿದ್ದು ಸರ್ಕಾರದ ಇತರೆ ಇಲಾಖೆಗಳು ಪ್ರಜಾಪ್ರಭುತ್ವದ ಆಶಯದ ರಥವನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸ ಮಾಡಲಿವೆ.

ಸೆಪ್ಟೆಂಬರ್ ೧೫ರೊಳಗೆ ನಿಮ್ಮ ವೀಡಿಯೋಗಳನ್ನು ಕಳುಹಿಸಿ

ಅತ್ಯುತ್ತಮ 10 ವಿಡಿಯೋಗಳಿಗೆ ತಲಾ 15,000 ಮೌಲ್ಯದ ಬಹುಮಾನಗಳು!

democracy in 60 seconds - video contest

ಈ ವಿಷಯಗಳಲ್ಲಿ ಒಂದರ ಮೇಲೆ 40 ರಿಂದ 60 ಸೆಕೆಂಡುಗಳ ರೀಲ್ ಅನ್ನು ರಚಿಸಿ:

ಭಾರತವು ಪ್ರಜಾಪ್ರಭುತ್ವವನ್ನು ಏಕೆ ಆಯ್ಕೆಮಾಡಿತು?

ಪ್ರಜಾಪ್ರಭುತ್ವ ಕುರಿತಂತೆ ತುಂಬಾ ಶ್ರೇಷ್ಠವಾದುದು ಏನು?

ನಾನು ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಹೇಗೆ ಆಚರಿಸಿದ್ದೇನೆ?

ಇಂದಿನ ಪ್ರಪಂಚದಲ್ಲಿ ಭ್ರಾತೃತ್ವದ ಪ್ರಸ್ತುತತೆ ಏನು?

ಯಾವ ಕ್ರಮಗಳು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ತಳ್ಳುತ್ತವೆ? ಹಾಗೂ ಈ ಅಪಾಯದ ವಿರುದ್ಧ ರಕ್ಷಣೆ ಪಡೆಯಲು ಜನರು ಏನು ಮಾಡಬಹುದು?

ನಿಮ್ಮ ಇನ್ಸ್ಟಾಗ್ರಾಮ್, X(ಟ್ವಿಟರ್), ಫೇಸ್ಬುಕ್ ಅಥವಾ ಯೂಟ್ಯೂಬ್ ಖಾತೆಯಲ್ಲಿ #ಕರ್ನಾಟಕ_ಪ್ರಜಾಪ್ರಭುತ್ವ_ದಿನ_೨೦೨೪ ಎಂಬ ಹ್ಯಾಷ್ಟ್ಯಾಗ್ನೊಂದಿಗೆ ವೀಡಿಯೊವನ್ನು ಪೋಸ್ಟ್ಮಾಡಿ ಮತ್ತು ಅದರ ಲಿಂಕ್ಗಳನ್ನು ಇಲ್ಲಿ ಹಂಚಿಕೊಳ

ಕಾರ್ಯಕ್ರಮದ ಮಾರ್ಗ ನಕ್ಷೆ

2024 ರ ಪ್ರಜಾಪ್ರಭುತ್ವ ದಿನದ ಮುಖ್ಯಾಂಶಗಳು

ಇದು ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಪ್ರದರ್ಶಿಸುವುದಲ್ಲ, ಆದರೆ ನಮ್ಮ ಪರಿಸರವನ್ನು ರಕ್ಷಿಸುವಂತಹ ನಮ್ಮ ಮೂಲಭೂತ ಕರ್ತವ್ಯಗಳನ್ನು ನೆನಪಿಸುತ್ತದೆ.

ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಒತ್ತಿಹೇಳುವ ಪ್ರಜಾಪ್ರಭುತ್ವದ ಬ್ಯಾನರ್ ಮತ್ತು ಭಿತ್ತಿಪತ್ರ ಗಳನ್ನು ಪ್ರದರ್ಶಿಸುತ್ತಾರೆ. ಈ ಸಂದರ್ಭದಲ್ಲಿ ಮಾನವ ಸರಪಳಿಯಲ್ಲಿ ಭಾಗವಹಿಸುವವರಿಂದ ರಾಜ್ಯಾದ್ಯಂತ 10 ಲಕ್ಷ ಸಸಿಗಳನ್ನು ನೆಡಲು ಆಯೋಜಿಸಲಾಗಿದೆ. ಆ ಮೂಲಕ ನಮ್ಮ ಪರಿಸರವನ್ನು ರಕ್ಷಿಸುವಂತಹ ಕಾಳಜಿಯನ್ನೂ ನೆನಪಿಸುತ್ತಾರೆ.

ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ವಿಶಿಷ್ಟ ಸನ್ನಿವೇಶದ ಭಾಗವಾಗುತ್ತಾರೆ. ವಿಧಾನಸೌಧದ ಮುಂದೆ ಭಾರತದ ಸಂವಿದಾನದ ಪೀಠಿಕೆಯ ಪ್ರತಿಯನ್ನು ಸ್ಥಳದಲ್ಲೇ ಮುದ್ರಿಸಲು ಅವರಿಗೆ ಒಂದು ಅನನ್ಯ ಅವಕಾಶವಿದೆ.

ಮಾನವ ಸರಪಳಿಯ ಮಾರ್ಗ ನಕ್ಷೆಯನ್ನು QR ಕೋಡ್‌ನೊಂದಿಗೆ ಪ್ರಕಟಿಸಲಾಗುತ್ತದೆ. ಇದರಿಂದ ಯಾರಾದರೂ ಮಾನವ ಸರಪಳಿಯಲ್ಲಿ ಸೇರಬಹುದು. ಬೆಳಗ್ಗೆ 9:30 ಗಂಟೆಗೆ ಮಾನವ ಸರಪಳಿ ರಚಿಸಲಾಗುವುದು. ಬೆಳಗ್ಗೆ 10:00ಕ್ಕೆ ಮಾನವ ಸರಪಳಿ ಬಿಡುವ ಮುನ್ನ ಸಂವಿಧಾನ ಪೀಠಿಕೆ ವಾಚನ ನಡೆಯಲಿದೆ. ಬೆಳಗ್ಗೆ 10:00 ರಿಂದ 10:30 ರ ವರೆಗೆ ಸಸಿಗಳನ್ನು ನೆಡುವ ಕಾರ್ಯಕ್ರಮ ನಡೆಯಲಿದೆ.

10 ಲಕ್ಷ

ಸಸಿಗಳನ್ನು ನೆಡಲಾಗುತ್ತದೆ

25 ಲಕ್ಷ

ಭಾಗವಹಿಸುವವರು ಸಂವಿದಾನ ಪೀಠಿಕೆಯನ್ನು ಓದುತ್ತಾರೆ

ಗಣ್ಯರಿಂದ ಪ್ರಮುಖ ಸಂದೇಶಗಳು

2024 ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ನಮ್ಮೊಂದಿಗೆ ಕೈಜೋಡಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ

ಮಾಧ್ಯಮ ಪ್ರಸಾರ

ಈ ಕಾರ್ಯಕ್ರಮದ ಬಗ್ಗೆ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಏನು ಹೇಳುತ್ತವೆ ಎಂಬುದನ್ನು ವೀಕ್ಷಿಸಿ

31

ಜಿಲ್ಲೆಗಳನ್ನು
ಒಳಗೊಂಡಿದೆ

2500

ಕಿಲೋಮೀಟರುಗಳ
ಮಾನವ ಸರಪಳಿ (ಅಂದಾಜು)

2500000

ನಿರೀಕ್ಷಿತ ಭಾಗವಹಿಸುವವರ
ಒಟ್ಟಾರೆ ಸಂಖ್ಯೆ

1000

ಭಾಗವಹಿಸುವವರು ಪ್ರತಿ
ಕಿಲೋಮೀಟರ್‌ಗೆ ನಿರೀಕ್ಷಿಸಲಾಗಿದೆ

2023ರ ಪ್ರಜಾಪ್ರಭುತ್ವ ದಿನದ ಒಂದು ಹಿನ್ನೋಟ

ಕರ್ನಾಟಕ ಸರ್ಕಾರವು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ನಿಜವಾದ ಅರ್ಥದಲ್ಲಿ ಆಚರಿಸಲಾಯಿತು.

ಹಲವಾರು ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಗಾಗಿ ಪ್ರಜಾಪ್ರಭುತ್ವದ ಆಶಯಗಳು ಅಕ್ಷರಶಃ ಕುಸಿಯುತ್ತಿದ್ದಂತಹ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ರಾಜ್ಯ ಸರ್ಕಾರವು ಸಂವಿಧಾನದ ಪ್ರಸ್ತಾವನೆಯನ್ನು ಶಾಲೆ, ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಓದಬೇಕೆಂಬ ನಿಯಮವನ್ನು ಜಾರಿಗೊಳಿಸಿತು.

ಇದಕ್ಕೆ ಪೂರಕವಾಗಿ 15 ಸೆಪ್ಟೆಂಬರ್ 2023 ರಂದು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ ಜರುಗಿದ "ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ" ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಮಾನ್ಯ ಉಪಮುಖ್ಯ ಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಹಾಗೂ ಸನ್ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ಮತ್ತು ಸಚಿವ ಸಂಪುಟದ ಇತರೆ ಸಚಿವರು ವಿಧಾನಸೌಧದ ಮುಂಭಾಗ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು.

ಈ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪರಸ್ಪರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ಸುಮಾರು 20 ಹೊರ ದೇಶಗಳು, ಭಾರತದ 507 ಜಿಲ್ಲೆಗಳು ಮತ್ತು ರಾಜ್ಯದ 31 ಜಿಲ್ಲೆಗಳಲ್ಲಿ ವಾಸಿಸುವ ಭಾರತೀಯರು ನೇರವಾಗಿ ಮತ್ತು ಆನ್ ಲೈನ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 2 ಕೋಟಿ 31 ಲಕ್ಷಕ್ಕೂ ಹೆಚ್ಚು ಜನರು ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಗೆ ಈ ದಾಖಲೆ ಸೇರ್ಪಡೆಯಾಯಿತು.

ಈ ಮಹತ್ವದ ಕಾರ್ಯಕ್ರಮದಲ್ಲಿ ಸುಮಾರು 10000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಜೊತೆಗೆ NGO ಮತ್ತು ಸಂಘ ಸಂಸ್ಥೆಗಳೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಭಾಗವಹಿಸುವಿಕೆ, ಉಪಕ್ರಮ ಇತ್ಯಾದಿಗಳ ಕುರಿತು ನಿಮ್ಮ ಹೆಚ್ಚಿನ ಪ್ರಶ್ನೆಗಳಿಗೆ ನಾವು ಉತ್ತರಿಸಿದ್ದೇವೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ಯಾವುದೇ ಪ್ರಮಾಣಪತ್ರವನ್ನು ಪಡೆಯುತ್ತೇನೆಯೇ?

ಮಾನವ ಸರಪಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕರ್ನಾಟಕ ಸರ್ಕಾರದಿಂದ ಪ್ರಶಂಸಾ ಪತ್ರಕ್ಕೆ ಅರ್ಹರಾಗಿರುತ್ತಾರೆ. ಭಾಗವಹಿಸುವವರ ಛಾಯಾಚಿತ್ರವನ್ನು ಪ್ರಮಾಣಪತ್ರದಲ್ಲಿ ಮುದ್ರಿಸಲು ಅವಕಾಶ ಹೊಂದಿರಲಿದೆ, ಇದು ಭಾಗವಹಿಸುವವರಿಗೆ ಜೀವಮಾನದ ಸ್ಮರಣೆಯಾಗಲಿದೆ. ಒಂದು ಫೋಟೋ ಫ್ರೇಮ್‌ನಲ್ಲಿ, 5 ಸದಸ್ಯರವರೆಗೆ ಅವಕಾಶವಿದ್ದು, ಕುಟುಂಬಗಳು ಒಟ್ಟಿಗೆ ನಿಲ್ಲಲು, ಚಿತ್ರವನ್ನು ತೆಗೆದುಕೊಳ್ಳಲು, ಅದನ್ನು ಅಪ್‌ಲೋಡ್ ಮಾಡಲು ಮತ್ತು ಪ್ರಮಾಣಪತ್ರದಲ್ಲಿ ಮುದ್ರಿಸಲು ಅವಕಾಶವನ್ನು ಒದಗಿಸುತ್ತದೆ. ಇದು ಅಮೂಲ್ಯವಾದ ಸ್ಮರಣಿಕೆಯಾಗುವುದು.